ನೆನಪಿನ ರಂಗಸ್ಥಳ (ಕೆರೆಮನೆ ಶಿವರಾಮ ಹೆಗಡೆ ಆತ್ಮಕಥನ)
ನೆನಪಿನ ರಂಗಸ್ಥಳ (ಕೆರೆಮನೆ ಶಿವರಾಮ ಹೆಗಡೆ ಆತ್ಮಕಥನ)
ನೆನಪಿನ ರಂಗಸ್ಥಳ (ಕೆರೆಮನೆ ಶಿವರಾಮ ಹೆಗಡೆ ಆತ್ಮಕಥನ)
Share:
₹180
₹200
10% off
Ships within 3 days
SKU :
96
Description

ನಿರೂಪಣೆ: ಜಿ.ಎಸ್. ಭಟ್

ಮೊದಲ ಮುದ್ರಣ: 1995

ಎರಡನೆಯ ಮುದ್ರಣ: 2021

ಪುಟಗಳು: 176+(4ಫೋಟೋಸ್)=180

ಬೆಲೆ: 200/-

ರಿಯಾಯಿತಿ: 10%

ಪ್ರಕಾಶನ: ಅಭಿನವ, ಬೆಂಗಳೂರು

................

ಕೆರೆಮನೆ ಶಿವರಾಮ ಹೆಗಡೆಯವರ ಆತ್ಮಚರಿತ್ರೆಯನ್ನು ಓದಲು ಕೈಗೆತ್ತಿಕೊಂಡಿದ್ದೀರಲ್ಲವೇ? ಈ ಗಳಿಗೆಯಲ್ಲಿ ಇದನ್ನು ನಿರೂಪಿಸುವ ಅವಕಾಶ ಪಡೆದ ನಾನು ಒಂದೋ ಎರಡೋ ಮಾತು ಹೇಳಲಾ?

 

ಶಿವರಾಮ ಹೆಗಡೆ ಸಹಜ ಬಡತನದಲ್ಲಿ ಹುಟ್ಟಿದರು. ದಿನದ ಅನ್ನಕ್ಕಾಗಿ ಕಟಪಟೆ ಮಾಡುತ್ತಲೇ ಮುಖಕ್ಕೆ ಬಣ್ಣ ಹಚ್ಚಿ ಆಟ ಕುಣಿಯುವ ಗೀಳನ್ನು ಹಚ್ಚಿಕೊಂಡರು. ವಿಶಿಷ್ಟ ಪಾತ್ರಾಭಿನಯ, ಸಂಘಟನೆ, ಚಿಂತನೆಗಳ ಮೂಲಕ ಬೆಳೆದು ನಿಂತರು. ಯಕ್ಷಗಾನ ರಂಗಭೂಮಿಗೂ ಅದರ ಸುತ್ತ ಇದ್ದ ಸಮಾಜಕ್ಕೂ ಬೆಳವಣಿಗೆಯ ಚೈತನ್ಯ ನೀಡಿದರು. ತಾನು ಹುಟ್ಟಿ ಬೆಳೆದ ನೆಲದ ಸಾರ ಹೀರಿ ಪುನಃ ಆ ನೆಲದ ಕಸುವಿಗೆ ಕಾರಣರಾದರು. ಎಂಬತ್ತನಾಲ್ಕು ವರ್ಷಗಳ ನಿಡುಬಾಳಿನ ವಿವಿಧ ಅನುಭವಗಳಿಗೆ ತನ್ನ ಅಂತರಂಗವನ್ನು ಒಡ್ಡಿಕೊಂಡರು. ಆ ಅನುಭವಗಳನ್ನು ಸಮಾನ ಹೃದಯಕ್ಕೆ ಪಾವತಿ ಮಾಡುವ ಶಕ್ತಿ ಉಳ್ಳವರೂ ಆಗಿದ್ದರು.


 ಇವೇ ಮುಂತಾದ ಕಾರಣಗಳಿಗಾಗಿ ಅವರ ಆತ್ಮಕಥನ ಆಸಕ್ತ ಓದುಗರಿಗೆ ಅಗತ್ಯ ಎಂದು ಭಾವಿಸಿದರೆ ತಪ್ಪಲ್ಲ. ಆದರೆ ಅದನ್ನು ಹಿಡಿದು ಇಡುವುದು ಹೇಗೆ? ಶಿವರಾಮ ಹೆಗಡೆಯವರು ಮಾತಾಡಬಲ್ಲರೇ ವಿನಃ ಬರೆಯಲಾರರು. ಅವರ ಬರವಣಿಗೆಯ ಶಕ್ತಿ ಪತ್ರ ಬರೆಯುವುದಕ್ಕೆ ಮಾತ್ರ ಸೀಮಿತ. ಸುದೀರ್ಘ ಅನುಭವಗಳನ್ನು ನೆನಪಿಸಿಕೊಂಡು ಒಂದು ವ್ಯವಸ್ಥೆಯಲ್ಲಿ ಬರೆಯುತ್ತ ಹೋಗುವುದು ಎಂಥವರಿಗೂ ಕಷ್ಟದ ಕೆಲಸ. ಆಗ ಸಹಜವಾಗಿ ಹೊಳೆದದ್ದು ಧ್ವನಿಮುದ್ರಣದ ತಂತ್ರ. ಅವರ ಮಾತುಗಳನ್ನು ಕ್ಯಾಸೆಟ್‍ಗಳಲ್ಲಿ ಹಿಡಿದು ನಂತರ ಬರೆದು ತೆರೆಯಬಹುದು ಎನಿಸಿತು. ಇದಕ್ಕೆ ಶ್ರೀ ಶಂಭು ಹೆಗಡೆಯವರೂ ಒಪ್ಪಿದರು. ಕ್ಯಾಸೆಟ್‍ಗಳನ್ನೂ ಒದಗಿಸಿದರು. ಅಷ್ಟರಮಟ್ಟಿಗೆ ನನ್ನ ಕೆಲಸವೂ ಸುಲಭವಾಯಿತು. ಇದೊಂದು ಮಂಡಳಿಯದೇ ಕೆಲಸ ಎಂಬ ಭಾವನೆಯಿಂದ ಪ್ರಾರಂಭಿಸಿದೆ. 1982ರ ಅಕ್ಟೋಬರ್ ತಿಂಗಳಲ್ಲಿ ix ಸುಮಾರು ಒಂದು ವಾರ ಕಾಲ ಸಾಗರದ ನನ್ನ ಮನೆಯಲ್ಲಿ ಶ್ರೀ ಶಿವರಾಮ ಹೆಗಡೆಯವರ ಸನ್ನಿಧಿಯಲ್ಲಿ ಕುಳಿತು ಸಮಗ್ರವಾದ ಅವರ ಬದುಕನ್ನು ನೇರ ಅವರ ಬಾಯಿಂದಲೇ ಕೇಳಿದೆ, ಧ್ವನಿಮುದ್ರಿಸಿಕೊಂಡೆ. ನಾನೊಂದು ಸಹಜ ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರವೆಂಬಂತೆ ಅವರು ಹೇಳುತ್ತಾ ಹೋದರು. ಆತ್ಮೀಯನಾದ ಕಿರಿಯ ಸ್ನೇಹಿತನೊಬ್ಬನ ಎದುರಿಗೆ ತನ್ನ ಅಂತರಂಗವನ್ನು ತೋಡಿಕೊಳ್ಳುವಂತೆ ಅವರು ಮಾತನಾಡಿದರು. ನನ್ನ ಪ್ರಶ್ನೆಗಳನ್ನು ಕ್ಯಾಸೆಟ್ಟಿನಲ್ಲಿ ದಾಖಲಿಸಲಿಲ್ಲ. ಆ ಪ್ರಶ್ನೆಗಳು ನೆನಪನ್ನು ಕೆದಕುವ, ಜೋಡಿಸುವ, ಮಾತನ್ನು ಮುಂದುವರೆಸುವ ಸಹಜ ನಿರೂಪಣೆಗೆ ನೆರವಾದವು. ಹಾಗೆಂದು ಇದು ಸಂದರ್ಶನ ಅಲ್ಲ. ಸುಮ್ಮನೆ ಕುಳಿತು ಸುದ್ದಿ ಹೇಳುವುದು ಎನ್ನುತ್ತಾರಲ್ಲ; ಆ ಧಾಟಿ. ಕ್ಯಾಸೆಟ್ಟನ್ನು ಕೇಳಿದವರಿಗೆ ಅವರು ಎದುರು ಕುಳಿತವರೊಂದಿಗೆ ತನ್ನ ನೆನಪನ್ನು ಉದುರಿಸುತ್ತ ಹೋದ ಹಾಗೆ ಅನ್ನಿಸಬಹುದು; ಅಷ್ಟೆ, ಅಂಥ ಒಂದು ಆಪ್ತವಾದ ಆತ್ಮೀಯ ಧಾಟಿಯನ್ನು ಬಹುಶಃ ಓದುಗರಾದ ನೀವೂ ಅನುಭವಿಸುತ್ತೀರೆಂದು ನಂಬಲಾ?


-ಜಿ.ಎಸ್. ಭಟ್

(ನಿರೂಪಕರ ಮಾತುಗಳಿಂದ)

ಅಭಿನವ24 products on store
Payment types
Create your own online store for free.
Sign Up Now