ಬಾಳು ಸಾವು ಒಡ್ಡತ್ತಿರುವ ಆಮಿಷ!
ಬಾಳು ಸಾವು ಒಡ್ಡತ್ತಿರುವ ಆಮಿಷ!
ಬಾಳು ಸಾವು ಒಡ್ಡತ್ತಿರುವ ಆಮಿಷ!
Share:
₹75
Ships within 3 days
SKU :
89
Description

ಉಪನಿಷತ್ತಿಗೊಂದು ಮರುಪ್ರವೇಶ


ಲೇಖಕರು: ಲಕ್ಷ್ಮೀಶ ತೋಳ್ಪಾಡಿ

ಬೆಲೆ: 75/-       ಪುಟಗಳು: 84

ಪ್ರಕಾಶನ: ಅಭಿನವ, ಬೆಂಗಳೂರು

....................

ಉಪನಿಷತ್ತು' ಎಂದರೆ ಸರಳವಾಗಿ-ಹತ್ತಿರ ಕುಳಿತಿರುವುದು ಎಂದು. ಹತ್ತಿರ ಇರುವಿಕೆ. `ಇರುವಿಕೆ'ಯ ಹತ್ತಿರ. ಮೊಟ್ಟೆಯ ಮೇಲೆ ಹಕ್ಕಿ ಕಾವು ಕೂತಂತೆ. ಒಡಲೊಳಗಿನ ಮಗು ತಾಯಿಗೆ ಹತ್ತಿರ ಮತ್ತು ತಾಯಿ; ಮಗುವಿಗೆ ಹತ್ತಿರವಾಗಿರುವಂತೆ. ಉಪನಿಷತ್ತು ಆಧ್ಯಾತ್ಮಿಕ ವಾಙ್ಮಯವಾಗಿರುವುದರಿಂದ, ಬದುಕಿನ ಆಳವಾದ `ಸತ್ಯ'ದ ಹತ್ತಿರ ಕೂರುವುದು - ಅದರ ಜೊತೆಗೇ ಇರುವುದು - ಎಂದು. `ಸತ್ಯ' ಎಂದರೆ ಇರುವಿಕೆ ಎಂದೇ ಅರ್ಥ. `ಇರುವಿಕೆ'ಗೆ ಅದರ ಹತ್ತಿರ ಇರುವುದಲ್ಲದೆ ಬೇರಿನ್ನಾವ ಕಲಾಪಗಳೂ ಪ್ರಸ್ತುತವಲ್ಲ. ಕರ್ಮಕಾಂಡದಲ್ಲಿ ತಮ್ಮ ಆಸೆಗಳನ್ನು ನೆರವೇರಿಸಿಕೊಳ್ಳುವುದಕ್ಕೆ ಅಗ್ನಿಯ ಮುಂದೆ ಕುಳಿತು ಹೋಮಿಸುವುದನ್ನು ನೆನಪಿಸುವಂತೆ ಅದಕ್ಕಿಂತ ಭಿನ್ನವಾದ ಇನ್ನೊಂದು ರೀತಿಯ ಕುಳಿತಿರುವಿಕೆ ಇದೆ ಎಂದು ಸೂಚಿಸಲು ಉಪನಿಷತ್-ಹತ್ತಿರ ಕುಳಿತಿರುವಿಕೆ- ಎಂದೇ ಹೇಳಿದರು. ಅಗ್ನಿಯ ಮುಂದೆ ಕುಳಿತಿರು. ಹೋಮಿಸು. ಈ ಕಲಾಪದಿಂದ ನಿನ್ನ ಆಸೆಗಳನ್ನು ಈಡೇರಿಸಿಕೊಳ್ಳಬಹುದೇನೋ. ಆದರೆ `ಸತ್ಯ'ದ ಬಳಿ ಕುಳಿತಿರು. ಅದು, ಸದ್ದಿಲ್ಲದೆ ನಿನ್ನ ಆಸೆಗಳನ್ನೇ ತಾನು ಆಹುತಿ ತೆಗೆದುಕೊಂಡು ನಿನ್ನನ್ನು ತನ್ನಂತೆ ಮಾಡಿಕೊಳ್ಳುವುದು. ಹಾಗಿರುವುದೇ `ಇರುವಿಕೆ'ಯ ಜೀವಂತಿಕೆ ! ಇರುವಿಕೆಯ ಜೀವಂತಿಕೆಯನ್ನು ಅನುಭವಿಸಲು ಅದರ ಹತ್ತಿರ ಕುಳಿತರೆ ಸಾಕು !

****

ಬದುಕೆನ್ನುವುದು `ಕ್ಷಣಿಕ' ಎನ್ನುವುದೇ ಸಾವಿನ ಕಾಣ್ಕೆಯಾಗಿರುವುದರಿಂದ, ವಿಚಿತ್ರವೆನ್ನುವಂತೆ, ಕ್ಷಣಿಕತೆಯೇ ವಿರಕ್ತಿಗಿಂತ ಹೆಚ್ಚಾಗಿ ಬದುಕಿನಲ್ಲಿ ರುಚಿಯನ್ನು ಉದ್ದೀಪಿಸುವ ಭಾವವೂ ಆಗಿರುವುದರಿಂದ, ಅಂದರೆ- ಮುಗಿಯುವ ಮುನ್ನ ಆದಷ್ಟು ಸವಿಯೋಣ ಎಂದು ತೀವ್ರವಾಗಿ ಅನ್ನಿಸುವುದರಿಂದ- ಬದುಕನ್ನು ಸವಿಯುವುದಿಲ್ಲವೇನು? ಎಂದು ಸಾವೇ ಕೇಳುತ್ತಿರುವಂತೆ ಉಪನಿಷತ್ತು ಚಿತ್ರಿಸುತ್ತದೆ!

ಅಭಿನವ24 products on store
Payment types
Create your own online store for free.
Sign Up Now