ಸಾವಿನ ದಶಾವತಾರ (ಕಾದಂಬರಿ)
ಸಾವಿನ ದಶಾವತಾರ (ಕಾದಂಬರಿ)
ಸಾವಿನ ದಶಾವತಾರ (ಕಾದಂಬರಿ)
Share:
₹135
Ships within 3 days
SKU :
99
Description

ಲೇಖಕರು: ಕೆ. ಸತ್ಯನಾರಾಯಣ ಬೆಲೆ:150/- ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು

https://youtu.be/m_GuarYR1KA

ಶ್ರೀಶೈಲ್ ಅವರು ಓದಿದ ಪುಸ್ತಕ....

ಪ್ರತಿಯೊಂದು ಕಾದಂಬರಿಕಾರರಿಗೂ ಕಾದಂಬರಿ ರಚನೆಗೆ ತಮ್ಮದೇ ಆದ ಶೈಲಿ ಇರುತ್ತದೆ. ಕನ್ನಡದ ಮಟ್ಟಿಗಂತೂ ಹೆಸರಾಂತ ಕಾದಂಬರಿಕಾರರಲ್ಲಿ ಹೆಚ್ಚಿನವರು ಅವರದೇ ಆದ ಶೈಲಿ ಹೊಂದಿರುತ್ತಾರೆ. ಕಾದಂಬರಿಯಿಂದ ಕಾದಂಬರಿಗೆ ಅವರು ಬರೆಯುವ ವಿಷಯ ವಸ್ತು, ಭಾಷಾ ಳಕೆಯ ವಿಧಾನ ಭಿನ್ನವಾಗಿರಬಹುದು ಆದರೆ ಅವರ ಶೈಲಿ ಮಾತ್ರ ಒಂದೇ ಇರುತ್ತದೆ. ಶಿವರಾಮ ಕಾರಂತ, ಎಸ್.ಎಸ್.ಭೈರಪ್ಪ, ಪೂರ್ಣಚಂದ್ರ ತೇಜಸ್ವಿ ಹಾಗೂ ಹೆಚ್ಚಿನ ಲೇಖಕರ ಕಾದಂಬರಿಗಳನ್ನು ಓದಿದವರಿಗೆ ಅವರದೇ ಆದ ಶೈಲಿಯ ಬಗ್ಗೆ ಪರಿಚಯವಿರುತ್ತದೆ. ಇದು ಇಂಥವರದೇ ಶೈಲಿ ಎಂದು ಹೆಳುವಷ್ಟರ ಮಟ್ಟಿಗೆ.

ಇದು ಕಾದಂಬರಿ ರಚನಾ ಶೈಲಿಯಾಯಿತು. ಹಾಗೇನೆ ನಮ್ಮ ಕನ್ನಡದಲ್ಲಿ ಕಾದಂಬರಿಗೆ ತನ್ನದೇ ಆದ ವ್ಯಾಕರಣ ಇದೆ, ಚೌಕಟ್ಟಿದೆ, ಕಾದಂಬರಿ ಅಂದರೆ ಹಿಗೇನೆ ಬರೆಯಬೇಕು ಎಂಬ ಅಲಿಖಿತ ನಿಯಮವಿದೆ. ಅದು ಎಲ್ಲರಿಗೂ ಗೊತ್ತಿರುವ ವಿಷಯ. ಕಥಾ ವಸ್ತುವಿನಲ್ಲಿ, ಭಾಷೆಯ ಬಳಕೆಯಲ್ಲಿ, ಬೇರೆ-ಬೇರೆ ಅಲಕ್ಷಿತ ವಿಷಯಗಳನ್ನು ಇಟ್ಟುಕೊಂಡು ಕಥಾ ಹಂದರ ಹೆಣೆಯುವ ದೃಷ್ಟಿಯಲ್ಲಿ ಭಿನ್ನತೆ ಕಂಡು ಬಂದರೂ ಕಾದಂಬರಿಯೆಂದರೆ ಹೀಗೆನೆ ಇರಬೇಕು ಎಂಬ ಭೌತಿಕ ಬಂಧನದಲ್ಲಿ ಸಿಲುಕಿದೆಯಾ ಎಂಬ ಅನುಮಾನ ಕಾಡಿದ್ದರೆ ಅದು ಸಹಜವೇ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಕಾದಂಬರಿಯನ್ನು ರಚನೆ ಮಾಡುವಲ್ಲಿ ಇತ್ತಿಚಿನ ಕೆಲವು ಲೇಖಕರು ಗಮನ ಹರಿಸಿರುವುದು ಸಾಹಿತ್ಯದ ದೃಷ್ಟಿಯಿಂದ ಉತ್ತಮವಾದ ಬೆಳವಣಿಗೆ. ಇತ್ತಿಚೆಗೆ ಓದಿದ ಸೇತುರಾಮ ಅವರ ನಾವಲ್ಲ ಕಥಾ ಸಂಕಲನವೂ ಒಂದು ಹೊಸ ಶೈಲಿಯಿಂದ ರಚಿತಗೊಂದು ಅನೇಕ ಸಾಹಿತ್ಯ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಕೆ. ಸತ್ಯನಾರಾಯಣ ಅವರ ಸಾವಿನ ದಶಾವತಾರ ಕಾದಂಬರಿ ಕೂಡ ಇಂಥ ಭಿನ್ನ ಶೈಲಿಯಿಂದ ರಚಿತಗೊಂಡ ಯಶಸ್ವಿ ಪ್ರಯೋಗವಾಗಿದೆ. ಇಲ್ಲಿನ ಕಾದಂಬರಿಯ ಶೈಲಿ ವಿಶಿಷ್ಟವಾಗಿದ್ದು ಕಥಾ ನಾಯಕನ ಸ್ವಗತದ ನಿರೂಪಣೆಯು ಮುಕ್ಕಾಲು ಭಾಗವಿದ್ದು ಇನ್ನುಳಿದ ಭಾಗದಲ್ಲಿಯೂ ಕಾದಂಬರಿಯ ಪ್ರಮುಖ ಪಾತ್ರಗಳು ಬಂದರೂ ಅವನ್ನೂ ಕಥಾ ನಾಯಕನೇ ನಿರೂಪಿಸುತ್ತಾನೆ. ಆದರೆ ಇದರಲ್ಲಿ ಬರುವ ಉಳಿದ ಪಾತ್ರವಾಗಲಿ, ಕಥಾನಾಯಕನಾಗಲಿ ಬರೀ ನಿಮಿತ್ಯ ಮಾತ್ರ. ಇಲ್ಲಿನ ಸನ್ನಿವೇಶಗಳು, ವಿವರಣೆಗಳು ಅಲ್ಲಿ ಹೇಳುವ ಮಾತುಗಳು ಮಾತ್ರ ಮುಖ್ಯವಾಗುತ್ತದೆ. ಇಲ್ಲಿ ಕಥೆ ಎನ್ನುವುದು ನೀರನ್ನು ತಂದಿಟ್ಟ ಬಿಂದಿಗೆ ಮಾತ್ರ. ನೀರು ಕುಡಿದ ಮೇಲೆ ನೀರಿನ ರುಚಿ, ನೀರು ತಂಪಾ ಅಥವಾ ಬಿಸಿಯಾ, ಎಷ್ಟು ಶುಚಿಯಾಗಿದೆ, ಯಾವ ಬಾವಿಯ ನೀರು ಎಂಬುದು ಮುಖ್ಯವಾಗುತ್ತದೆ ಹೊರತು ಅದನ್ನು ತಂದ ಬಿಂದಿಗೆ ನಿಮಿತ್ಯ ಮಾತ್ರ. ನೀರು ಕುಡಿದ ಮೇಲೆ ಹಂಗು ಹರಿದುಕೊಂಡು ಹೋಗುತ್ತದೆ. ಈ ದೃಷ್ಟಿಯಿಂದ ನೋಡಿದರೆ ಸತ್ಯನಾರಾಯಣರವರು ಈ ಕಾದಂಬರಿ ಹೊಸ ಶೈಲಿಯನ್ನು ನಮಗೆ ಪರಿಚಯಿಸುತ್ತದೆ.

ಈ ಕಾದಂಬರಿಯ ನಿರೂಪಿತವಾಗಿದ್ದು ಅನುಭವದ ಹಿನ್ನೊಟ. ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ತನಗಾದ ಅನುಭವವನ್ನು ನೆನಪಿಸಿಕೊಂಡು ಅದರ ಮೂಲಕ ಬದುಕಿನ ಜಿಜ್ಞಾಸೆಯನ್ನು ಮಾಡುವುದು. ಬದುಕಿನ ಜಿಜ್ಞಾಸೆಯನ್ನು ಮಾಡಲು ಶ್ರೇಷ್ಟವಾದ ಅಥವಾ ವಿಶಿಷ್ಟವಾದ ಅನುಭವಗಳೇ ಆಗಬೇಕು ಎಂದೇನಿಲ್ಲ. ಎಲ್ಲರ ಅನುಭವಗಳು ಜಿಜ್ಞಾಸೆಗೆ ಒಳಪಡಿಸುವಂತವು. ಇಲ್ಲಿ ಕಾಥಾನಾಯಕ ಶವ ಸಂಸ್ಕಾರ ಮಾಡುವ ಕಾಂಟ್ರಾಕ್ಟ್ ನಡೆಸುತ್ತಿರುತ್ತಾನೆ. ಸಾವಿನ ನಂತರ ಮಾಡಬೇಕಾದ ಅಪರ ಕರ್ಮಗಳನ್ನು ಗುತ್ತಿಗೆ ರೂಪದಲ್ಲಿ ಮಾಡಿಕೊಡುವುದನ್ನು ಹಲವಾರು ವರ್ಷಗಳಿಂದ ವೃತ್ತಿಯನ್ನಾಗಿಸಿಕೊಂಡ ವಕ್ತಿಯ ಅನುಭವಗಳ ದಾಖಲೆಯೆ ಈ ಕಾದಂಬರಿಯ ಹೂರಣ. ಸಾವು ಅನ್ನೋದು ಎಲ್ಲ ಜೀವನದಲ್ಲಿ ಬಹು ಮುಖ್ಯವಾದ ಅಂಗ. ಜಗತ್ತು ನೀನು ಹೇಗೆ ಬದುಕಿದೆ ಎಂಬ ಕುತೂಹಲಕ್ಕಿಂತ ಹೇಗೆ ಸತ್ತೆ ಎಂಬುದರ ಮೇಲೆ ಹೆಚ್ಚು ಕುತೂಹಲವನ್ನಿಟ್ಟುಕೊಂಡಿರುತ್ತದೆ. ಸೇತುರಾಮ್ ಅವರ ನಾಟಕದಲ್ಲಿ ಬರುವಂತೆ “ಹುಳದ ಬದುಕೇ ಬದುಕಿ ಆದ್ರೆ ಸತ್ತ ಮೇಲೆ ಹುಳ ಬೀಳಬಾರದು” ಎನ್ನುವಂತೆ ಎಲ್ಲರ ಗಮನ ಬದುಕಿಗಿಂತ ಸಾವಿನ ಮೇಲೆ ಇರುತ್ತದೆ. ಹಾಗದರೆ ಅದರಲ್ಲಿ ಅಚ್ಚುಕಟ್ಟುತನ ಬೇಡವೇ (?) ಎಂಬ ಪ್ರಶ್ನೆಗಳು ಬಂದಾಗ ಹಾಗೂ ಈಗಿನ ತೀವ್ರಗತಿಯಲ್ಲಿ ಸಾಗುವ ಜಗತ್ತಿಲ್ಲಿ ಎಲ್ಲರೊಂದಿಗೆ ಇಷ್ಟವಿದ್ದೂ, ಇಲ್ಲದೆಯೂ ಅದರೊಂದಿಗೆ ಹೆಜ್ಜೆ ಹಾಕ ಬೇಕಾಗುತ್ತದೆ. ಸಾವಿನಲ್ಲಿ ದುಖಃ, ಪ್ರೇಮ, ವೈರಾಗ್ಯ, ದುರಾಸೆ, ವೈಮನಸ್ಸು, ಅಂತರ್ಮುಖತೆ ಹಾಗೂ ಹೆಸರಿಸಲಾಗದ ಅನೇಕ ಸಂಚಾರಿ ಭಾವಗಳು ವ್ಯಕ್ತವಾಗುತ್ತದೆ. ಇಂತಹ ಸಾವಿರಾರು ಸಾವುಗಳನ್ನು ನೋಡಿದ ವ್ಯಕ್ತಿಯ ಅನುಭವಗಳು ಖಂಡಿತವಾಗಿಯೂ ಶ್ರೀಮಂತವೇ ಸರಿ. ಅಂಥ ಅನುಭವಗಳನ್ನಿಟ್ಟುಕೊಂಡು ಬದುಕಿನ ಜಿಜ್ಞಾಸೆಯನ್ನು ಮಾಡುತ್ತದೆ ಈ ಕಾದಂಬರಿ. ಕಾದಂಬರಿಯಲ್ಲಿ ಬರುವ ಸನ್ನಿವೇಶಗಳು, ಅನುಭವದ ಮಾತುಗಳನ್ನು ಕಾದಂಬರಿಯನ್ನೇ ಓದಿ ತಿಳಿಕೊಳ್ಳುವುದು ಒಳ್ಳೆಯದು. ಇತ್ತಿಚಗೆ ಈದಿಕ ಕಾದಂಬರಿಗಲ್ಲಿ ಇಷ್ಟವಾದ ಕೆಲವೇ ಕಾದಂಬರಿಗಳಲ್ಲಿ ಇದೂ ಒಂದು.

ಅಭಿನವ24 products on store
Payment types
Create your own online store for free.
Sign Up Now